ಪುಟಗಳು

ಸೋಮವಾರ, ಸೆಪ್ಟೆಂಬರ್ 14, 2009

ನಿಮ್ಮೊಳಗೂ ಅವನಿರಬಹುದೇ


ತಲೆ
ಮಾಂಸವೋ ನೂಲ್ಸೋ ಪಿಜ್ಜಾನೋ
ಟೇಬಲ್ಲಿಗೆ ಬಂದಾಗೆಲ್ಲ ದೊಡ್ಡಿಯ ನೆನಪಾಗುತ್ತದೆ
ಅವಳೀಗ ಏನು ತಿನ್ನುತ್ತಿರಬಹುದು?
ಛೆ ಅವಳಲ್ಲಿ ಊಗುದುರಿದ ಬರಲುಗಯ್ಯಲ್ಲಿ
ಸೀಕಲು ಮುದ್ದೆ ಗೊಡ್ದುಗಾರಗಳಲ್ಲಿ ಏಗುವಾಗ
ನಾನಿಲ್ಲಿ ಹೇಗೆ ನೂಡಲ್ಸ್ ತಿನ್ನಲಿ
ಅವಳ ಕೈ ತುತ್ತು ತಿಂದ ಕೂಸು ನಾನು

ಥಿಯೇಟರಿನಲ್ಲಿ ನುಣುಸೊಂಟ ಬಳಸುವಾಗ
ಗಾನ ನಾಟ್ಯಗಳ ಎದುರೇ ಅವ್ವನ ಮುಖ ತೇಲಿ ಬರುತ್ತದೆ
ಅವಳೀಗ ಏನು ಮಾಡುತ್ತಿರಬಹುದು?
ಛೆ ಅವಳಲ್ಲಿ ಹರಿದ ಚೆಡ್ಡಿಗೆ ತೇಪೆ ಹಾಕುತ್ತ
ತೂತು ಗುಡಿಸಲಲ್ಲಿ ನೀರ ಬೋಸುತ್ತ ಒಬ್ಬಂಟಿ ಏಗುವಾಗ
ನಾನಿಲ್ಲಿ ಹೇಗೆ ಸೆಟ್ ದೋಸೆ ತಿನ್ನಲಿ?
ಅವಳ ತಗ್ಗು ನುಗ್ಗದ ಚಿಲವಾರ ಚೊಂಬು ಮುಖ
ಎದುರು ಬಂದಾಗೆಲ್ಲ ಏನೊಂದೂ ರುಚಿಸುವುದಿಲ್ಲ ಇಲ್ಲಿ
ಅವಳ ಕಣ್ಣೀರು ಉಪವಾಸಗಳ ಕೂಸು ನಾನು

ಕ್ಲಾಸಿಗೆ ಚಕ್ಕರ್ ಹೊಡೆಯುವಾಗ ಸ್ಕ್ರೀಮ್ ತಿನ್ನುವಾಗ
ಗ್ಲಾಸು ತುಟಿಗೆ ಇಡುವಾಗೆಲ್ಲ ಅಕ್ಕನ ಕೂಲಿನಾಲಿ ಗೇಮೆಯೂ
ಅಣ್ಣನ ದೇಸಾಂತರ ಪಾಡೂ ಎದುರು ಬಂದು ನಿಲ್ಲುತ್ತವೆ.
ನಾನು ನನ್ನನ್ನೇ ಕೇಳಿಕೊಳ್ಳುತ್ತೇನೆ
ನಾನೀಗ ಮಾಡುತ್ತಿರುವುದು ಸರಿಯೋ ?

ಹೌದು ನನ್ನೊ
ಗೊಬ್ಬ ಸೈನಿಕನಿದ್ದಾನೆ
ಅವನು ಭಾರೀ ಅಕಾರ ಬೆಳೆಯುತ್ತಿದ್ದಾನೆ
ತಲೆಮಾಸಿದ ಅಡ್ನಾಡಿ ಗಳಿಗೆಗಳಲ್ಲಿ
ಧುತ್ತನೆ ಒಳಗಿಂದಲೇ ಪ್ರತ್ಯಕ್ಷನಾಗುತ್ತಾನೆ
ನೀನೀಗ ಮಾಡುತ್ತಿರುವುದು ಸರಿಯೋ ಎಂದು ಕೇಳುತ್ತಾನೆ
ಮನಕೆ ರೆಕ್ಕೆಯ ಕಟ್ಟು ತೋಳುಗಳ ಆಕಾಶದಗಳ ಬೆಳೆಸು
ಗಾಗಾ ಗೀಗೀ ಎಂದು ಲಾಲಿ ಹಾಡುತ್ತ ತಲೆದೂಗಿಸುತ್ತಾನೆ
ಅವನು ಬೆಳೆದು ಬೆಳೆದು ನಾನೆ ಒಡೆದು ಹೋ
ದೇನೆಂದು
ನಾನೀಗ ಅವನಿಗಿಂತ ಬೃಹದಾಕಾರ ಬೆಳೆಯಬೇಕೆಂದು ತೊಡಗಿದ್ದೇನೆ

ನೀವು ಯಾರ ಕೂಸು?
ನಿಮ್ಮೊಳಗೂ ಅವನಿರಬಹುದೇ?

ಹೊಸತು ಪತ್ರಿಕೆ -ಸೆಪ್ಟಂಬರ್ -2009




ಶನಿವಾರ, ಸೆಪ್ಟೆಂಬರ್ 12, 2009

ತುಂಬಿರಯ್ಯ ಚೀಲಾ


ತುಂಬಿರಯ್ಯ ಚೀಲ ತುಂಬಿರಯ್ಯ ಚೀಲಾ
ಎಷ್ಟು ತುಂಬಿದರು ತುಂಬದಾ ಬ್ರಹ್ಮಾಂಡ ಚೀಲವ
ತುಂಬಿರಯ್ಯ ಚೀಲಾ ತುಂಬಿರಯ್ಯ ಚೀಲಾ ತುಂ
ತುಂಬಿರಯ್ಯ ಚೀಲಾ
||ತುಂಬಿರಯ್ಯ ಚೀಲಾ ||


ನಿಂತೇ ತುಂಬಿ ನಡೆದಾಡಿ ತುಂಬಿ ನೀವ್ ಕೂತು ತುಂಬಿ
ಮಲಗಿದ್ದೂ ತುಂಬಿ ತುಂ ತುಂಬಿ ತುಂಬಿ ಎಷ್ಟಾರು ತುಂಬಿ
||ತುಂಬಿರಯ್ಯ ಚೀಲಾ ||

ತುಂಬಿ ತುಂಬಿ ಸುರಿವಾಟದಲ್ಲಿ
ಹಿಂದಿಲ್ಲ ಲೋಕ ಮುಂದಿಲ್ಲ ಲೋಕ
ಜೀವಾದಿ ತುಂಬಿ ಯೀ ಭೂಮಿ ತುಂಬಿ ಯೀ ನದಿಯ ತುಂಬಿ
ಯಾಕಾಸ ತುಂಬಿ ತುಂ ತುಂಬಿ ಸುರಿವ ಸರಕೋ
ಬ್ರಹ್ಮಾಂಡ ಪೂರ ತುಂ ತುಂಬಿ ಸುರಿವ ಸರಕೋ
||ತುಂಬಿರಯ್ಯ ಚೀಲಾ ||

ಮಕ್ಕಾಳ ತುಂಬಿ ಮರಿಗಾಳ ತುಂಬಿ ಹೆಂಡಾ ತುಂಬಿ
ದಂಡೆಲ್ಲ ತುಂಬಿ ನಿಮ್ಮಂಥ ನಿಮ್ಮ ರಕ್ಕಸರ ತುಂಬಿ
ನಿಮ್ಮಂಥ ನಿಮ್ಮ ಕುರಿಗಾಳ ತುಂಬಿ
ಲೋಕಾವೆ ತುಂಬಿ ಸುರಿವಂಥ ಚೀಲವೇನೋ
ಬ್ರಹ್ಮಾಂಡ ಪೂರ ಸುರಿಸುರಿದು ತುಂಬಿ ಸುರಿವಂಥ ಚೀಲವೇನೋ
||ತುಂಬಿರಯ್ಯ ಚೀಲಾ ||

ಚೀಲಾ ಚೀಲದೊಳಗೆ ಚೀಲಾ ಮೂರು ದಿನದ ಚೀಲಾ
ನೀನೆ ನಿನ್ನ ಚೀಲಾ ಇದ ತಾನರಿದು ನೋಡು ಚೀಲಾ
ಅರಿಯದಿದ್ದರೆ ಚೀಲೋ ನೀನೆ ಹರಿದು ಹೋದ ಚೀಲಾ
||ತುಂಬಿರಯ್ಯ ಚೀಲಾ ||


ಸೋಮವಾರ, ಸೆಪ್ಟೆಂಬರ್ 7, 2009

ಸಾಕು


ಇರಿಯಲು
ಕತ್ತಿ ಯಾಕೆ ಬೇಕು?
ಇನ್ನಿಲ್ಲದಂತೆ ಪ್ರೀತಿಸಿ ಮರೆತಂತೆ ನಟಿಸಿ ಸಾಕು.
ಕೊಲ್ಲಲು ವಿಶವೆ ಯಾಕೆ ಬೇಕು?
ಹ್ ಸುಮ್ಮನೆ ತಿರಸ್ಕರಿಸಿ ಸಾಕು.

ಶನಿವಾರ, ಸೆಪ್ಟೆಂಬರ್ 5, 2009

ಇದು ಖ್ಯಾತ ತಮಟೆ ವಾದಕ ಶ್ರೀ ಪಿಂಡಿಪಾಪನಳ್ಳಿ
ಮುನಿವೆಂಕಟಪ್ಪ ಅವರಿಗೆ ಡಾ.ಎಲ್. ಬಸವರಾಜು ಪ್ರಶಸ್ತಿಯನ್ನು
ನೀಡುತ್ತಿರುವ ಸನ್ನಿವೇಶ
ಇದು ಚಿ. ಶ್ರೀನಿವಾಸರಾಜು ಅವರೊಂದಿಗಿನ ಸಂದರ್ಶನ.
ಜೊತೆಯಲ್ಲಿ ರಾಜು ಮೇಷ್ಟರ ಪತ್ನಿ ಸರಸ್ವತಿ ಅವರು ಇದ್ದಾರೆ.

ಕನ್ನಡಿಗಳು ಹರಿದು ಹಾವುಗಳೇ ಅದ್ವಲ್ಲೇ ಅವ್ವ

ಮಕ್ಕಾಳು ಮರಿಗಾಳು ಹಿಡಿದಿದ್ದ ಹೊಸ ಹಳೆಯ ಕನ್ನಾಡಿಗೋಳು
ಅವ್ವ ಹರಿದರಿದು ಅಡ್ನಾಡಿ ಹಾವುಗಳೇ ಅದ್ವಲ್ಲೇ
ಕನ್ನಾಡಿಗೋಳು

ಖಾಲಿಗಳು ಗೋಡೆಗಳು ಬಂಡಾಯ ಸಂಘಾಯ ಕಲಸಿಕೊಂಡೋ
ಅವ್ವ ಬೇಳೇಯ ಬೇಸುವರೋ ಚಳಿಯಾನೆ ಕಾಸುವರೋ ಕರಿನಾಗರೋ
ಅವ್ವ ಬಿ
ಳಿನಾಗರೋ ಅವ್ವ ಗೊಧೀಯ ನಾಗರವು ತೆಕ್ಕೆ ಬಿದ್ದೋ

ಅದಿಯಾದೀಯಿಂದ ಒಡೆಒಡೆದ ಮನಸುಗಳ ಕೆಡವೀದ ಪ್ರತಿಮೆಗಳ ಕಟ್ಟುವರೆ ಇಲ್ವಲ್ಲೆ ಅವ್ವ
ಸಮರಸದ ಗಾಳೀಯೋ ಸಮರಾದ ಗಾಳೀಯೋ ಊದ್ಯಾವೆ ಊರೆಲ್ಲ ಬೆಂಕೀ
ಅವ್ವ ಕಾವೇರಿ ತಾಯೀನೇ ಪುರಾನೇ ಸುರಿದಾರು ಆರಾದೆ ಹತ್ತೀದ ಬೆಂಕಿ

ಅವ್ವ ಜೀವಾದ ಮಕ್ಕಾಳ ಬಡಿ ಬಡಿದು ಬಗ್ಗೀಸಿ ಬೆರಣೀಯ ತಟ್ಟುವರು ನೋಡೇ
ಅವ್ವ ಅಚ್ಚುಗಳ ತೊಳೆದಿಕ್ಕಿ ಮಚ್ಚುಗಳ ಬಚ್ಚಿಕ್ಕಿ ಗುಂಡ್ಕಾಯ ಕಾಸುವವೇ ಕುಲುಮೆ
ಅವ್ವ
ಇಸುಮಂ
ಲೋ ಅವ್ವ ಕೊಳತ್ ಮಂಲೋ ಅವ್ವ ಒಂದೊಂದು ಗವ್ ಗತ್ಲೆ ವಕ್ಕಲೇನೆ

ಅವ್ವ
ದಾರಾದ ದಾರ್ಯೆಲ್ಲ ಕಕ್ಕಾಬಿಕ್ಕೀಯಾಗಿ ದಾರಿಗರ ಕಂಗೆಡಿಸೋ ಮಾಯೆ
ಅವ್ವ ನಾವೇನೆ ಶಿಶುಗಾಳು ಕನ್ನಾಡಿ ಆಗುವೆವೆ ಜೀವಾವ ನೀಡಮ್ಮ ತಾಯೆ