ಪುಟಗಳು

ಶುಕ್ರವಾರ, ಅಕ್ಟೋಬರ್ 30, 2009

ಸಾಗರವನ್ನು ಸೇರಿನ ತಳದಿಂದ ಅಳೆವವನು

ಅಣ್ಣ ತಮ್ಮಂದಿರು

ದಡಕಚ್ಚಿ ಸಾಗರವನ್ನು
ಸೇರಿನ ತಳದಿಂದ ಅಳೆಯುವವನು

ನೆಲಕಚ್ಚಿ ಆಕಾಶವನ್ನು
ಕಯ್ಯ ಮೊಳದಿಂದ ಅಳೆಯುವವನು

ಹಠಗೊಂಡು ಭಾವನೆಗಳನ್ನು
ಅಕ್ಷರದಿ ಹಿಡಿದು ಕಟ್ಟುವವನು

ಈ ಮೂವರೂ ಅಣ್ಣ ತಮ್ಮಂದಿರು


ಇಲ್ವಲ್ಲ

ಮಾವಿನ ತೋಪನು ಕಾಯುವ ಮಾಲಿಯು
ಹಣ್ಣನು ತಿನ್ನುವ ಹಾಗಿಲ್ಲ !
ಯಾರು ತಾವೇ ಗುಲಾಬಿ ತೋಟವೋ
ಅವರೇ ಮುಡಿಯುವ ಹಾಗಿಲ್ಲ !
ಹಾರುವ ಹಕ್ಕಿಗೆ ಉಳುವಾ ಎತ್ತಿಗೆ
ಹೊಟ್ಟೆ ಬಾಯೇ ಇಲ್ವಲ್ಲಾ !


ತಿಂಗಳು ಪತ್ರಿಕೆ -ಅಗಸ್ಟ್ -2009

ಬಾರೆ ಇಲ್ಲವೆನಬೇಡ

ಬಾರೆ ಇಲ್ಲವೆನಬೇಡ

ಬಯ್ಯದಿರು, ಸಿಟ್ಟಾಗದಿರು
ಬಾರೆ ಇಲ್ಲವೆನಬೇಡ

ನಿನ್ನ ಕೆನ್ನೆಯನೊಮ್ಮೆ ಹೀಗೆ ಮುಟ್ಟಿ
ಸವರು
ತ್ತಾನಷ್ಟೇ
ಇನ್ನೇನು ಇಲ್ಲವೇ ದಮ್ಮಯ್ಯ
ನನ್ನ ಪ್ರಾಣದ ಗೆಳೆಯ ಕುರುಡ ಕಣೆ

ಬೆಳದಿಂಗಳೆಂದರೆ ಅವನಿಗೆ ಗೊತ್ತಿಲ್ಲವಂತೆ
ಒಮ್ಮೆ ಮುಟ್ಟಿ ನೋಡಲಿ
ನಿನ್ನ ಕೆನ್ನೆ ಬೆಳದಿಂಗಳ
ಬಾರೆ ಇಲ್ಲವೆನಬೇಡ


ಸಂಕ್ರಮಣ ಪತ್ರಿಕೆ387- ಸೆಪ್ಟಂಬರ್, ಅಕ್ಟೋಬರ್- 2009

ಆಗಲಾರದು ಹಾರ ಇಟ್ಟರೆ ಸೂಜಿ ದಾರಗಳ ದೂರ ದೂರ

ಹನಿ ಹನಿ 
೧.
ಆಗಲಾರದು ಹಾರ
ಇಟ್ಟರೆ ಸೂಜಿ ದಾರಗಳ
ದೂರ ದೂರ

೨.
ಗಾಳಿ ಎಂದಿಗೂ
ಹೂವಿನ ಪರಿಮಳವನ್ನು
ನೀನು ಎಲ್ಲಿ ಹುಟ್ಟಿದೆ ಎಂದು ಕೇಳುವುದಿಲ್ಲ.
ಅರೆ! ನಾನು ಎಲ್ಲಿ ಹೋದರೂ
ಯಾರ ಪೈಕಿ ಎಂದು ಕೇಳುತ್ತಾರಲ್ಲಾ!

೩.
ರೆಕ್ಕೆ ಬಿಡಿಸಿ ಬೇರೂರಿ
ಕಣ್ಣ ಹಣ್ಣುಗಳ ತೂಗುವ
ಚಿರ ಬಸುರಿ ನವಿಲು
ಮರ

೪.
ಎಲ್ಲರಿಗು ಕದಿಯಬೇಕೆನ್ನಿಸುವ
ಕವಿತೆಯ ಸಾಲು
ತಿದ್ದಿದ ಅವಳ ಹುಬ್ಬು

೫.
ಬೋರಲಾದ ತೊಟ್ಟಿಲು
ಈ ಆಕಾಶದ ಕೆಳಗೆ
ಪುಟ್ಟ ಮಕ್ಕಳು ನಾವು
ಈ ಭೂಮಿ ತಾಯಿಗೆ

ಮಯೂರ ಪತ್ರಿಕೆ ಅಕ್ಟೋಬರ್ -೨೦೦೯
ಬೆಳಗಾವಿಯಲ್ಲಿ ನಡೆದ ಅಲ್ಲಮ ಪ್ರಭು ಸಾಂಸ್ಕೃತಿಕ ಮುಖಾಮುಖಿ
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿರುವುದು

"ಅಲ್ಲಮಪ್ರಭು : ಅಧುನಿಕ  ಪೂರ್ವ ಅನುಸಂಧಾನಗಳು"